ಮಂಗಳೂರು: ಸೂರ್ಯಾಸ್ತ ಅದಕೂಡಲೇ ಮಂಗಳೂರಿನ ಮುಲ್ಕಿ, ಪಾವಂಜೆ, ಚಿತ್ರಾಪು, ಹೊಯ್ಗೆ ಗುಡ್ಡೆ, ಕಡಿಕೆ, ಸಂಕಲೆಕರೀಯ ನದಿ ತೀರದಲ್ಲಿ ದೋಣಿಗಳ ಆರ್ಭಟ ಪ್ರಾರಂಭ. ಆ ದೋಣಿಗಳು ಕೂಡಿಹಾಕಿದ ಅಕ್ರಮ ಹೊಯ್ಗೆಯನ್ನೂ ಸರಬರಾಜು ಮಾಡುವ ಟಿಪ್ಪರ್ ಗಳು ಚಲಿಸುವ ರಭಸಕ್ಕೆ ಸಾರ್ವಜನಿಕರು ರಸ್ತೆಗೆ ಇಳಿಯದಂತೆ ಮಾಡಿದೆ. ಅನೇಕ ಭಾರಿ ದೂರು ಕೊರಟ್ಟರು ಕ್ಯಾರೇ ಮಾಡದ ಮರಳು ಮಾಫಿಯಾಗಳು. ೧೧೨ ಗೆ ದೂರುಕೊಟ್ಟವರ ಫೋನ್ ನಂಬರ್ ಮರಳು ಮಾಫಿಯಾಕೆ ಕೊಡುವಂತ ಭ್ರಷ್ಟ ಪೊಲೀಸ್ ಅಧಿಕಾರಿಗಳು ಯಾರು??? ದೂರದಾರರಿಗೆ ರೌಡಿಗಳ ಮೂಲಕ ಧಮ್ಕಿ ಹಾಕಿಸಿ ಅವರ ಬಾಯಿ ಮ್ ಮುಚ್ಚಿಸುವ ಕೆಲಸ ನಿರಂತರವಾಗಿ ನಡಿಯುತಿದೆ. ಗಣಿ ಇಲಾಖೆಯ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಸೀಟ್ ಬಿಸಿ ಮಾಡುವುದು ಬಿಟ್ಟು ಪ್ರತಿದಿನ ಇಂತ ಅಕ್ರಮ ಮರಳು ದಕ್ಕೆಗಳಲ್ಲಿ ಇರುವ ದೋಣಿಗಳ್ಳನು ವಶಪಡಿಸುವುದು ಯಾವಾಗ? ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ತುರ್ತು ಮಧ್ಯಪ್ರವೇಶಿಸಿ ಮರಳು ಮಾಫಿಯಾ ಮುಕ್ತ ಜಿಲ್ಲೆಯಾಗಿ ಮಾಡಬೇಕೆಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತಿದೆ.