ಡಬ್ಲ್ಯುಎಚ್‌ಒ ಮಾನದಂಡಕ್ಕಿಂತ 5, 7 ಪಟ್ಟು ಹೆಚ್ಚು ವಾಯುಮಾಲಿನ್ಯ ಸರ್ಕಾರ, ಜನರಿಗೆ ಇದು ಎಚ್ಚರಿಕೆಯ ಗಂಟೆ: ಸಂಸ್ಥೆಯ ವರದಿ ಉಲ್ಲೇಖ
ಕರ್ನಾಟಕದ 3 ಪ್ರಮುಖ ನಗರಗಳಾದ ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ ವಾಯುಮಾಲಿನ್ಯವು ಹೆಚ್ಚುತ್ತಿ ರುವ ಕಾರಣ ಅಲ್ಲಿನ ಗಾಳಿಯ ಗುಣಮಟ್ಟ ಹದಗೆಟ್ಟಿದೆ ಎಂದು ‘ಗ್ರೀನ್ ಪೀಸ್ ಇಂಡಿಯಾ ಪರಿಸರ ಸಂಬಂಧಿ ಸ್ವಯಂಸೇವಾ ಸಂಸ್ಥೆಯ ವರದಿ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ ಒ) ನಿಗದಿಪಡಿಸಿದ ಗಾಳಿಯ ಗುಣಮಟ್ಟದ ಮಾರ್ಗಸೂಚಿಯಾದ ಪಿಎಂ 2.5 ಮತ್ತು ಪಿಎಂ10 ಗುಣಮಟ್ಟಗಳನ್ನು ದಕ್ಷಿಣ ಭಾರತದ 10 ಪ್ರಮುಖ ನಗರಗಳು ಮೀರಿವೆ.
ಇದರಲ್ಲಿ ಕರ್ನಾಟಕದ ಈ 3 ನಗರಗಳಿವೆ ಎಂದು ‘ಸ್ಟೇರ್‌ದಿ ಏರ್2’ ವರದಿಯಲ್ಲಿ ವಿವರಿಸಿದೆ. 5 لا
ವರದಿಯಲ್ಲಿ ಏನಿದೆ?
. ಮಂಗಳೂರಿನಲ್ಲಿ ಡಬ್ಲ್ಯು ಎಚ್‌ಒ ಮಾನದಂಡಕ್ಕಿಂತ 7 ಪಟ್ಟು ಹೆಚ್ಚು ವಾಯುಮಾಲಿನ್ಯವಿದೆ
* ಬೆಂಗಳೂರು ಮತ್ತು ಮೈಸೂರಿನಲ್ಲಿ ಮಾನದಂಡಕ್ಕಿಂತ 5 ಪಟ್ಟು ಹೆಚ್ಚು ವಾಯುಮಾಲಿನ್ಯ ಕಂಡುಬಂದಿದೆ
ಮಾಲಿನ್ಯದ ಮಿತಿಯನ್ನು ದಕ್ಷಿಣ ಭಾರತದ 10 ನಗರಗಳು ಮೀರಿವೆ
* ವಾಯುಮಾಲಿನ್ಯ ನಿಯಂತ್ರಣಕ್ಕೆ ಈಗ ನಡೆದಿರುವ ಯತ್ನಗಳು ಸಾಲದು
* ಇದಕ್ಕಿಂತ ಹೆಚ್ಚಿನ ಪ್ರಯತ್ನಗಳು ನಡೆಯ ಬೇಕು. ಏಕೆಂದರೆ ಶುದ್ಧ ಗಾಳಿಯು ಎಲ್ಲರ ಹಕ್ಕು
ದಕ್ಷಿಣ ಭಾರತದ ಅತಿ ಮಲಿನ ನಗರಗಳು ಹೈದರಾಬಾದ್ ಚೆನ್ನೈ ! ವಿಶಾಖಪಟ್ಟಣಂ ಕೊಚ್ಚಿ ಮಂಗಳೂರು ಅಮರಾವತಿ | ವಿಜಯವಾಡ | ಬೆಂಗಳೂರು! ಮೈಸೂರು | ಪಾಂಡಿಚೇರಿ