ರಾಜಕೀಯರಾಜ್ಯ

ಡಿಸೆಂಬರ್‌ಗೆ ಸಂಪುಟ ಸರ್ಜರಿ? ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬದಲಾವಣೆ ಈಗಲೇ ಇಲ್ಲ: ಮೂಲಗಳು

D. K. Shivakumar and Siddaramaiah

ಕನ್ನಡಪ್ರಭ ವಾರ್ತೆ ಬೆಂಗಳೂರು ರಾಜ್ಯ ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಶುಕ್ರವಾರ ಹೈಕಮಾಂಡ್ ಜತೆಗೆ ನಡೆದ ಸಭೆಯಲ್ಲಿ ಯಾವುದೇ ಚರ್ಚೆಯಾಗಿಲ್ಲ. ಪೂರ್ವ ನಿಗದಿಯಂತೆ ಸಂಪುಟ ಪುನಾರಚನೆಯು ಡಿಸೆಂಬರ್‌ನಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಶುಕ್ರವಾರ ದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ಅವರು ಸಂಪುಟ ಪುನಾರಚನೆ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎಂಬ ವದಂತಿ ಹರಡಿತ್ತು.

ಈ ಬಗ್ಗೆ ಕಾಂಗ್ರೆಸ್ ಉನ್ನತ ಮೂಲಗಳು ಸಷ್ಟನೆ ನೀಡಿದ್ದು, ಕಳೆದ ಬಾರಿ ಎಐಸಿಸಿ ಜತೆಗಿನ ಸಭೆಯಲ್ಲಿಯೇ ಸಂಪುಟ ಪುನಾರಚನೆ ಬಗ್ಗೆ ಚರ್ಚಿಸಲಾಗಿತ್ತು. ಈ ವೇಳೆ ಡಿಸೆಂಬರ್‌ನಲ್ಲಿ ಸಂಪುಟ ಪುನ‌ರ್ ರಚನೆ ಬಗ್ಗೆ ತೀರ್ಮಾನಿಸ ಲಾಗಿದೆ. ಹೀಗಾಗಿ ಶುಕ್ರವಾರ ಎಐಸಿಸಿ ಅಧ್ಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ ನಾಯಕ ರಾಹುಲ್‌ ಗಾಂಧಿ ಸೇರಿ ವರಿಷ್ಠ ರೊಂದಿಗೆ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿಲ್ಲ ಎಂದು ತಿಳಿಸಿದ್ದಾರೆ. * 8

ಈಗೇಕೆ ಈ ಬಗ್ಗೆ ಚರ್ಚೆ?

* ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಮೊನ್ನೆ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿದ್ದರು

# ಈ ವೇಳೆ ಹೈಕಮಾಂಡ್ ಜೊತೆ ಸಂಪುಟ ಪುನಾರಚನೆ ಬಗ್ಗೆ ಚರ್ಚಿಸಿದ್ದಾರೆಂದು ವದಂತಿ ಹರಡಿತ್ತು

* ಆದರೆ ಮೂಲಗಳ ಪ್ರಕಾರ ಮೊನ್ನೆಯ ಸಭೆಯಲ್ಲಿ ಸಂಪುಟ ಪುನಾರಚನೆ ಬಗ್ಗೆ ಚರ್ಚೆಯೇ ನಡೆದಿಲ್ಲ

* ಡಿಸೆಂಬರಲ್ಲಿ ಸಂಪುಟ ಪುನಾರಚನೆ ಬಗ್ಗೆ ತಿಂಗಳ ಹಿಂದೆಯೇ ಸಿಎಂ ಹಾಗೂ ವರಿಷ್ಠರ ನಡುವೆ ಚರ್ಚೆ

* ಮೊನ್ನೆಯ ಭೇಟಿಯಲ್ಲಿ ಮುಡಾ, ವಾಲ್ಮೀಕಿ ಹಗರಣ, ಪ್ರತಿಪಕ್ಷಗಳ ಹೋರಾಟ, ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ಸಿಂದ ನಡೆಸಬೇಕಾದ ಹೋರಾಟದ ಬಗ್ಗೆ ಚರ್ಚ.

ಗೌರ್ನರ್ ಗೆಹೋತ್ ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ರಾಷ್ಟ್ರಪತಿಗೆ ದೂರು: ಸಿಎಂ ಸಿದ್ದು ಸುಳಿವು ಮಸೂದೆ ವಾಪಸ್ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಸಾಧ್ಯತೆ

Related posts

ಸಿನಿಮೀಯ ಶೈಲಿಯಲ್ಲಿ ಬೆಳ್ಳಂಬೆಳಗ್ಗೆ ಕಿಲ್ಲಿಂಗ್ ಸ್ಟಾರ್ ಸ್ಥಳಾಂತರ ದರ್ಶನ್ ಈಗ ಬಳ್ಳಾರಿ ಕೈದಿ

kudlaadmin

ಅಕ್ಟೋಬ‌ರ್ 3ರಿಂದ 14ರ ವರೆಗೆ ವೈಭವದ ಮಂಗಳೂರು ದಸರಾ

kudlaadmin

Leave a Comment