ಮಂಗಳೂರುರಾಜಕೀಯ

ರಾಜ್ಯಪಾಲರ ವಿರುದ್ಧ ಐವನ್ ಡಿಸೋಜಾ ಹೇಳಿಕೆ; ಸುಮೊಟೊ ದೂರು ದಾಖಲಿಸಲು ಪಟ್ಟು ಹಿಡಿದ ಬಿಜೆಪಿ ಯುವ ಮೋರ್ಚ.

ರಾಜಭವನದ ಮೇಲೆ ಬಾಂಗ್ಲಾ ಮಾದರಿ ದಾಳಿ ಮಾಡುವುದಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜಾ ವಿರುದ್ಧ ಪೊಲೀಸರು ದೂರು ದಾಖಲಿಸಿಲು ಹಿಂದೇಟು ಹಾಕಿದ ಆರೋಪ ಕೇಳಿಬಂದಿದ್ದು, ಬಿಜೆಪಿ ಕಾರ್ಯಕರ್ತರು ಬರ್ಕೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕು ಇಲ್ಲವಾದರೆ ಬಾಂಗ್ಲಾದೇಶದ ಪ್ರಧಾನಿಗೆ ಬಂದ ಸ್ಥಿತಿ ರಾಜ್ಯಪಾಲರಿಗೆ ಬರಲಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಐವನ್ ಡಿಸೋಜ ಪ್ರಚೋದನಾತ್ಮಕ ಹೇಳಿಕೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಾ ಮೋರ್ಚಾ ಕಾರ್ಯಕರ್ತರು ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆದರೆ ಪೊಲೀಸರು ದೂರು ಸ್ವೀಕರಿಸಿಲ್ಲ ಎಂದು ಪೊಲೀಸರ ನಡೆ ವಿರುದ್ಧ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸ್ ಠಾಣೆ ಎದುರು ಕುಳಿತು ಪೊಲೀಸರಿಗೆ ಧಿಕ್ಕಾರ ಕೂಗಿದ ಕಾರ್ಯಕರ್ತರು.

ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ನಂದನ್ ಮಲ್ಯ ಮಾತನಾಡಿ- ನಮ್ಮ ಪ್ರತಿಭಟನೆಯ ನಂತರ ಬರ್ಕೆ ಪೊಲೀಸರು ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಜರುಗಿಸುತ್ತಾರೆ ಎಂದು ಹಿಂಬರಹ ನೀಡಿದ್ದಾರೆ. ಈ ಪ್ರಕರಣವನ್ನು ದಾಖಲಿಸದಿದ್ದಲ್ಲಿ ನಾಳೆ ಮತ್ತೆ ಬರ್ಕೆ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.

ಬಿಜೆಪಿ ಯುವ ಮೋರ್ಚಾದ ಪ್ರಮುಖರಾದ ಭರತ್ ರಾಜ್, ಅವಿನಾಶ್ ಸುವರ್ಣ, ಪ್ರಕಾಶ್ ಗರೋಡಿ, ವರುಣ್ ಅಶ್ರುತ್ ಮುಂತಾದವರು ಉಪಸ್ಥಿತರಿದ್ದರು.

Related posts

ಸಿಎಂ ಪ್ರತಿಕೃತಿ ದಹನ: ಶಾಸಕ ಯಶ್ವಾಲ್ ಸುವರ್ಣ ಮತ್ತಿತರರ ಮೇಲೆ ಎಫ್‌ಐಆ‌ರ್

kudlaadmin

ಸಿದ್ಧರಾಮಯ್ಯನವರ ಪ್ರಬಲ ಬೆಂಬಲಕ್ಕೆ ಬಂದಂತೆ ದಕ್ಷಿಣ ಕನ್ನಡ ಹೊತ್ತಿ ಉರಿಯುತ್ತಿದೆ.

kudlaadmin

ಡಿಸೆಂಬರ್‌ಗೆ ಸಂಪುಟ ಸರ್ಜರಿ? ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬದಲಾವಣೆ ಈಗಲೇ ಇಲ್ಲ: ಮೂಲಗಳು

kudlaadmin

Leave a Comment