ಚನ್ನಪಟ್ಟಣ ಸೋತರೆ ಎಚ್‌ಡಿಕೆಗೆ ಹಿನ್ನಡೆ ಚನ್ನಪಟ್ಟಣ ಕ್ಷೇತ್ರದ ಬಾಗಿಲು ಬಂದಾದರೆ ರಾಮನಗರದಲ್ಲಿ ಸ್ಪರ್ಧಿಸುತ್ತೇನೆ
ವಿಜಯ್ ಮಲಗಿಹಾಳ
ರಾಜ್ಯ ರಾಜಕಾರಣದಲ್ಲಿ ಈಗ ತೀವ್ರ ಕುತೂಹಲ ಮೂಡಿಸಿರುವುದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಎನ್‌ಡಿಎ ಒಕ್ಕೂಟದಿಂದ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು. ಬಿಜೆಪಿಯ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರಿಗೆ ಟಿಕೆಟ್ ಸಿಗುತ್ತದೆಯೋ ಅಥವಾ ಇಲ್ಲವೋ ಜಯ ಬಗ್ಗೆ ಬಿರುಸಿನ ಚರ್ಚೆ ನಡೆದಿದೆ. ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿಯೂ ಸ್ಪರ್ಧಿಸಲು ಸಿದ್ಧ ಎಂದು ಖಡಕ್ಕಾಗಿ ಹೇಳಿದ್ದ ಅವರು ಕಳೆದ ವಾರ ದೆಹಲಿಗೆ ಹೋಗಿ ಬಂದ ನಂತರ ಮೆತ್ತಗಾಗಿ ದಾರ್. ಬಿಜೆಪಿಯ ಚಿಹ್ನೆ ಅಲ್ಲದಿದ್ದರೆ ಜೆಡಿಎಸ್ ಚಿಹ್ನೆಯಿಂದಲೂ ಸ್ಪರ್ಧಿಸುವೆ, ಟಿಕೆಟ್ ಇಲ್ಲ ಎಂದರೂ ಪಕ್ಷದ ವಿರುದ ಹೋಗುವುದಿಲ್ಲ ಎಂದಿದ್ದಾರೆ. ಒಟ್ಟಾರೆ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಹಿನ್ನಲೆ ಯೋಗೇಶ್ವರ್ ಅವರು ‘ಮುಖಾಮುಖಿ’ಯಾಗಿದ್ದು ಹೀಗೆ..
ಮುಖಾ ಮುಖಕಾಂಗ್ರೆಸ್‌ಗೆ ಹೋಗಿ ಸುಲಭವಾಗಿ
ಎಲೆಕ್ಷನ್ ಗೆ ಸ್ಪರ್ಧಿಸಬಹುದಲ್ಲವೇ? ಹೋಗಬಹುದು. ಆದರೆ, ಮನಸ್ಸಿಲ್ಲ. ಹಿಂದೆ 10 ವರ್ಷಕ್ಕೂ ಹೆಚ್ಚು ಕಾಲ ಕಾಂ ಗ್ರೆಸ್‌ನಲ್ಲಿದ್ದೆ. ಮತ್ತೆ ಆ ಪಕ್ಷಕ್ಕೆ ಹೋದರೆ ‘మంవంగా కారో’ ఎందు గడి ಮಾಡುತ್ತಾರೆ. ಹಾಗಾಗಿ ಇಲ್ಲೇ ಇದ್ದರಾ ಯಿತು. ಮುಂದೆ ಅವಕಾಶ ಸಿಕ್ಕೇ ಸಿಗುತ್ತದೆ ಎಂಬ ನಿಲುವಿಗೆ ಬಂದಿದ್ದೇನೆ.
* ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮುಂಬರುವ ಉಪಚುನಾವಣೆ ಕುತೂಹಲದ ಕಣವಾಗಿ ಮಾರ್ಪಟ್ಟಿದೆಯಲ್ಲ?
-ನಾವು ಈಗ ಹಳೆಯ ಕಹಿ ಮರೆತು ಜೆಡಿಎಸ್ ಜತೆಗೆ ರಾಷ್ಟ್ರಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಇದಕ್ಕೆ ಪೀಠಿಕೆ ಹಾಕಿದ್ದೇ ನಾನು. ಕಾಂಗ್ರೆಸ್ ಯಾಕೋ ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಎಂದು ಅನಿಸಿದ್ದರಿಂದ ಆ ಪಕ್ಷವನ್ನು ಎದುರಿಸಲುಜೆಡಿಎಸ್ ಜತೆಗೆ ಕೈಜೋಡಿಸಿದೆವು. ಕಳೆದ ಲೋಕಸಭಾ ಚುನಾವಣೆಯಲ್ಲಿ ಇದು ಯಶಸ್ವಿಯೂ ಆಯಿತು. ಉಪಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎಂಬುದರ ಬಗ್ಗೆ ನಾವು ಸ್ಪಷ್ಟವಾಗಿದ್ದೇವೆ. ನಾನು ಹಿಂದೆ ಎರಡು ಬಾರಿ ಜೆಡಿಎಸ್ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿ ಕಡಮೆ ಮತಗಳ ಅಂತರದಿಂದ ಸೋಲುಂಡಿದ್ದೇನೆ. ಬೇರೆ ಬೇರೆ ಕಾರಣಗಳಿಂದಾಗಿ ಅವರು ಲೋಕಸಭಾ ಚುನಾವಣೆ ಗೆದ್ದಿರುವುದರಿಂದ ಎನ್‌ಡಿಎ ಮೈತ್ರಿಕೂಟದಿಂದ ನನಗೆ ಬಿಟ್ಟುಕೊಡಿ ಎಂದು ಕೇಳಿದ್ದೇನೆ. ಅಂತಿಮವಾಗಿ ಅವರು ಒಪ್ಪಿಕೊಳ್ಳುವ ವಿಶ್ವಾಸವಿದೆ.