ಯಾರಾಗಿರಬಹುದು ಆ ಕಪಟ ಕಾಮುಕ ಸ್ವಾಮೀಜಿ ಮತ್ತು ಆ ಕ್ರಿಮಿನಲ್ ವ್ಯಕ್ತಿ?? ಸ್ವಯಂಘೋಷಿತ ಇಂಟಕ್ ಅಧ್ಯಕ್ಷ ಯಾರಿರಬಹುದು???
ಕರ್ನಾಟಕ ಬೆಚ್ಚಿ ಬೀಳುವಂತ ಜಾಯಿಂಟ್ ವೆಂಚರ್ ಕಂಪನಿ ( ಸ್ವಾಮಿ + ಸೇವಕಿ + ಕ್ರಿಮಿನಲ್ ವ್ಯಕ್ತಿ + ಫೋರ್ಥ್ ಕ್ಲಾಸ್ ಯುವ ಇಂಟಕ್ ಅಧ್ಯಕ್ಷ ) ಉಡುಪಿ ಜಿಲ್ಲೆಯಲ್ಲಿ ಒಬ್ಬ ಜ್ಯೋತಿಷ್ಯನ ಮಗನ ಹನಿ ಟ್ರ್ಯಾಪ್ ಮಾಡಿ ದೊಡ್ಡ ಮೊತ್ತಕಾಗಿ ಬ್ಲಾಕ್ಮೇಲ್ ಮಾಡಿದ ಘಟನೆ ಬೆಳಕಿಗೆ ಬಂದಿದೆ .ವಿಪರ್ಯಾಸ ಅಂದರೆ ಆ ಜ್ಯೋತಿಷ್ಯನಿಗೆ ತನ್ನ ಸ್ವಂತ ಮಗನ ಭವಿಷ್ಯ ಕಾಣಲಿಲ್ಲ.
ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಎಲ್ಲರಿಗೆ ನೋಟೀಸ್ ಜಾರಿಮಾಡಿದ್ದಾರೆ ಎಂದು ತಿಳಿದು ಬಂದಿದೆ. ಪೊಲಿಟಿಕಲ್ ಕನೆಕ್ಷನ್ ಹೊಂದಿದ ಸ್ವಾಮಿ ಮತ್ತು ಆತನ ಸೇವಕಿಯ ಸಕಿಯೊಬ್ಬಳನ್ನು ಬಳಸಿ ಸ್ವಯಂ ಘೋಷಿತ ಇಂಟಕ್ ಯುವ ಅಧ್ಯಕ್ಷನ ಜೊತೆ ಸೇರಿ ಹನಿ ಟ್ರ್ಯಾಪ್ , ದಂದೆ ಪೊಲೀಸರು ಭೇದಿಸಿದ್ದಾರೆ ಇತ್ತ ಪೊಲೀಸರು ಈತನಿಗೆ ಶೋಧ ನಡೆಸುವ ಸಮಯದಲ್ಲಿ ಕಪಟ ಕಾಮಕ ಸ್ವಾಮೀಜಿ ಸಹಾಯಕ್ಕಾಗಿ ರಾಜಕಾರಣಿಗಳ ಮನೆಮನೆ ಅಲೆಯುತ್ತಿದ್ದಾನೆ. ಅನೇಕ ಡ್ರಗ್ ಮತ್ತು 420 ಕೇಸಿನಲ್ಲಿ ಭಾಗಿಯಾಗಿದ್ದ ಸ್ವಯಂಘೋಷಿತ ಯುವ ಇಂಟಕ್ ಅಧ್ಯಕ್ಷ ಪರಾರಿಯಾಗಿದ್ದಾನೆ.
ಈತ ಹಿಂದೆ ಕೂಡ ಹಲವು ಪ್ರತಿಷ್ಠಿತ ಮನೆತನದ ಮಹಿಳೆಯರ ಜೊತೆ ಸಂಬಂಧ ಬೆಳೆಸಿ ಅವರ ಪ್ರೈವೇಟ್ ವಿಡಿಯೋಗಳನ್ನು ಹಿಡಿದುಕೊಂಡು ಬ್ಲಾಕ್ ಮೇಲ್ ಮಾಡಿ ಹಣ ದೂಚಿರುವ ಹಲವಾರು ಪ್ರಕರಣಗಳು ನಡೆದಿದೆ. ಆದರೆ ಸಮಾಜಕ್ಕೆ ಹೆದರಿ ಯಾರೂ ಕೂಡ ಪೊಲೀಸ್ ದೂರು ದಾಖಲಿಸಲಿಲ್ಲ. ಇಂಥ ವ್ಯಕ್ತಿಗಳನ್ನು ಪೊಲೀಸ್ ಇಲಾಖೆ ಸು ಮೋಟೋ ಕೇಸ್ ದಾಖಲಿಸಿ ತನಿಖೆ ಮಾಡಿದರೆ ಮತ್ತಷ್ಟು ಹನಿ ಟ್ರ್ಯಾಪ್ ಕೇಸ್ ಗಳು ಬೆಳಕಿಗೆ ಬರಬಹುದು. ಆದರಿಂದ ನಮ್ಮ ದಕ್ಷ ನಿಷ್ಠಾವಂತ ಪೊಲೀಸ್ ಅಧಿಕಾರಿಗಳಾದ ಅನುಪಮ್ ಅಗರ್ವಾಲ್ ಮತ್ತು ಸಿದ್ದಾರ್ಥ್ ಗೋಯಲ್ ರವರು ಯಾವುದೇ ರಾಜಕೀಯ ಪ್ರಭಾವಕ್ಕೆ ಮಣಿಯದೆ ಇಂಥ ವ್ಯಕ್ತಿಯ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ ನೊಂದವರಿಗೆ ನ್ಯಾಯ ಕೊಡಬೇಕೆಂದು ಸಾರ್ವಜನಿಕರ ಪರವಾಗಿ ನಮ್ಮ ವಿನಂತಿ.