ಮಂಗಳೂರುರಾಜ್ಯ

ಅದ್ದೂರು ಸೇತುವೆ ಸಾಮರ್ಥ್ಯ ಪರೀಕ್ಷೆಗೆ ಕೊನೆಗೂ ಯಂತ್ರ ಬಂತು!

Adduru bridge testing

ತಾಲೂಕಿನ ಅಡ್ವರು ಸೇತುವೆಯ ಸಾಮರ್ಥ ಪರೀಕ್ಷೆ ಟೆಸ್ಟಿಂಗ್ ಯಂತ್ರ ಕೊನೆಗೂ ಪೊಳಲಿಗೆ ಆಗಮಿಸಿದೆ. ದುರ್ಬಲಗೊಂಡ ಅಡೂರು ಸೇತುವೆಯ ಮೇಲೆ ಧನ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿದ ಬಳಿಕ ಸೇತುವೆಯ ಸಾಮರ್ಥ ಪರಿಶೀಲನೆಗೆ ಬೆಂಗಳೂರಿನಿಂದ ಯಂತ್ರ ಬರಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೆ ಮುಗಿಲನ್ ಇತ್ತೀಚೆಗೆ ತಿಳಿಸಿದ್ದರು.

ಈ ನಡುವೆ ಅದ್ದೂರು ಸೇತುವೆಗೆ ಸಂಬಂಧಿಸಿದಂತೆ ನ್ಯಾಯ ಕೇಳಲು ಗ್ರಾಮಸ್ಥರ ಸೇರುವಿಕೆಯಲ್ಲಿ ಪೊಳಲಿ ಅಡ್ವರು ಸೇತುವೆ ಹೋರಾಟ ಸಮಿತಿ ಸೃಷ್ಟಿಯಾಗಿದೆ.

ಸೇತುವೆ ಸಾಮರ್ಥ ದ ಬಗ್ಗೆ ಎಂಜಿನಿಯರ್‌ಗಳು ವರದಿ ನೀಡಿದ ಬಳಿಕ ಮುಂದಿನ ನಿರ್ಧಾರವನ್ನು ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದರು. ಅಲ್ಲಿಯವರೆಗೆ ಸೇತುವೆಯ ಮೂಲಕ ಘನ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ. ಮತ್ತು ಸೇತುವೆ ಎರಡು ಭಾಗದಲ್ಲಿ ಪೋಲೀಸ್ ಚೆಕ್ ಪೋಸ್ಟ್ ಗಳನ್ನು ಹಾಕಲಾಗಿ ಕಾವಲು ಮಾಡಲಾಗುತ್ತದೆ ಎಂದು ತಿಳಿಸಿದ್ದರು. ಆದರೆ ಇದರಿಂದ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರಿಗೆ ಮಂಗಳೂರು ಹಾಗೂ ಇತರ ಕಡೆಗೆ ಸಂಚಾರ ಮಾಡಲು ತೊಂದರೆಯಾಗುತ್ತಿದೆ ಎಂದು ಅನೇಕ ಬಾರಿ ಜಿಲ್ಲಾಧಿಕಾರಿ ಸಹಿತ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರು.

ಸೇತುವೆ ಮೂಲಕ ಸಂಚಾರಕ್ಕೆ ನಿರ್ಬಂಧ ಹೇರಿ ತಿಂಗಳು ಕಳೆದರೂ ಅಧಿಕಾರಿ ವರ್ಗ ಸ್ಪಷ್ಟವಾದ ಮಾಹಿತಿ ನೀಡಿಲ್ಲ ಮತ್ತು ಸಾಮರ್ಥ ಪರೀಕ್ಷೆ ಯಂತ್ರವನ್ನು ತರಿಸಿಲ್ಲ ಎಂದು ಸ್ಥಳೀಯರು ಆರೋಪ ಮಾಡಿದ್ದರು. ಇದೀಗ ಕೊನೆಗೂ ಯಂತ್ರ ಸ್ಥಳಕ್ಕೆ ಆಗಮಿಸಿ, ಸಾಮರ್ಥ್ಯ ಪರೀಕ್ಷೆ ಆರಂಭಿಸಿದೆ.

ಇವರು ವರದಿ ನೀಡಿದ ಬಳಿಕ ಸ್ಪಷ್ಟವಾದ ಚಿತ್ರಣ ಸಿಗಲಿದ್ದು, ಮುಂದಿನ ಕ್ರಮವನ್ನು ಅಧಿಕಾರಿಗಳು

ಅದ್ದೂರು ಸೇತುವೆ ಸಾಮರ್ಥ ಪರೀಕ್ಷೆಗೆ ಬಂದ ಯಂತ್ರ, ವಹಿಸಲಿದ್ದಾರೆ. ಪರೀಕ್ಷೆ ಯಂತ್ರ ಸ್ಥಳಕ್ಕೆ ಆಗಮಿಸಿದ ವೇಳೆ ಅಡ್ವರು ಸೇತುವೆ ಹೋರಾಟ ಸಮಿತಿಯವರು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.

ಸಮಿತಿ ಅಸ್ತಿತ್ವಕ್ಕೆ:

ಸೇತುವೆಗೆ ಸಂಬಂಧಿಸಿದಂತೆ ನ್ಯಾಯ ಕೇಳಲು ಗ್ರಾಮಸ್ಥರ ಸೇರುವಿಕೆಯಲ್ಲಿ ಪೊಳಲಿ ಅದ್ದೂರು ಸೇತುವೆ ಹೋರಾಟ ಸಮಿತಿ ರಚನೆಯಾಗಿದೆ. ಪೊಳಲಿ ವೆಂಕಟೇಶ ನಾವಡ ಅವರನ್ನು ಹೋರಾಟ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಉಳಿದ ಸ್ಥಳೀಯರಿಗೆ ವಿವಿಧ ಹುದ್ದೆ ಗಳನ್ನು ನೀಡಲಾಗಿದ್ದು ಹೋರಾಟದ ಕಿಚ್ಚು ಮೂಡಿದೆ.

ಅಡ್ವರು ಸೇತುವೆಯಲ್ಲಿ ಘನ ವಾಹನ ಸಂಚಾರ ನಿರ್ಬಂಧ ಹೇರಿ ತಿಂಗಳಾಗುತ್ತಾ ಬರುತ್ತಿದ್ದು, ಈವರೆಗೆ ಸರಿಯಾದ ವ್ಯವಸ್ಥೆ ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಇದರ ವಿರುದ್ಧ ಮತ್ತು ಜನರಿಗೆ ಸೂಕ್ತವಾದ ನ್ಯಾಯ ಸಿಗಬೇಕು ಎಂಬ ನಿಟ್ಟಿನಲ್ಲಿ ಸ್ಥಳೀಯರು ವ್ಯವಸ್ಥೆ

ವಿರುದ್ಧ ಹೋರಾಡಲು ಸಮಿತಿ ರಚಿಸಲಾಗಿದೆ. ಪೊಳಲಿಯ ಸರ್ವಮಂಗಲ ಸಭಾಂಗಣದಲ್ಲಿ ಸಮಿತಿಗೆ

ಅಧಿಕೃತ ಚಾಲನೆ ದೊರಕಿತು.

ಜಿಲ್ಲಾಡಳಿತ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಿದ ಬಳಿಕ ಈ ಭಾಗದ ಸಾರ್ವಜನಿಕರಿಗೆ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಈ ಬಗ್ಗೆ ಸೂಕ್ತವಾದ ಬದಲಿ ವ್ಯವಸ್ಥೆ ಮಾಡಬೇಕಾದ ಜಿಲ್ಲಾಡಳಿತ ಜನರಿಗೆ ಸರಿಯಾದ ಮಾಹಿತಿ ನೀಡುವಲ್ಲಿ ವಿಫಲವಾಗಿದೆ.

ನಾವು ಈ ಬಗ್ಗೆ ಹೋರಾಟ ನಡೆಸಲು ಮುಂದಾಗಿದ್ದೇವೆ. ನಮ್ಮ ಹೋರಾಟದ ಮಾಹಿತಿ ಸಿಕ್ಕಿದ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಇಂದು ಸೇತುವೆ ಪರೀಕ್ಷೆ ಯಂತ್ರವನ್ನು ತರಿಸಿದ್ದಾರೆ. ಇನ್ನೇನಿದ್ದರೂ ಸೇತುವೆ ಯ ಸಾಮರ್ಥ ಪರೀಕ್ಷೆ ವರದಿ ಬಳಿಕ ಮುಂದಿನ ಹೋರಾಟದ ರೂಪುರೇಷೆಗಳನ್ನು ಮಾಡಲು ಚರ್ಚಿಸಲಾಗುತ್ತದೆ ಎಂದು ಪ್ರಮುಖರಾದ ಚಂದ್ರಹಾಸ ಪಲ್ಲಿಪಾಡಿ ತಿಳಿಸಿದ್ದಾರೆ

Related posts

ಪಿಲಿಕುಳ ಕಂಬಳಕ್ಕೆ ವಿಘ್ನ: ‘ಸೈಲೆಂಟ್ ರೋನ್’ ಘೋಷಣೆಗೆ ಮನವಿ

kudlaadmin

ಕಳೆದ 2 ದಶಕಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ದಕ್ಷಿಣ ಕನ್ನಡ ಯಾವಾಗಲೂ ಹೈವೋಲ್ಟೇಜ್ ರಣರಂಗವಾಗಿ ಪರಿಗಣಿಸಲ್ಪಟ್ಟಿದೆ.

kudlaadmin

ಡಿಸೆಂಬರ್‌ಗೆ ಸಂಪುಟ ಸರ್ಜರಿ? ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬದಲಾವಣೆ ಈಗಲೇ ಇಲ್ಲ: ಮೂಲಗಳು

kudlaadmin

Leave a Comment