ರಿವಾಲ್ವರ್ ಅಮಾನತು ರದ್ದುಪಡಿಸಲು ಮುಖ್ಯ ಮಂತ್ರಿಗಳ ಆಪ್ತ ಕಾರ್ಯ ದರ್ಶಿ ಹೆಸರಿನಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಗೆ ನಕಲಿ ಕರೆ ಮಾಡಿದ ಅಸಲಿ ಕಾಂಗ್ರೆಸ್ ಮುಖಂಡನೊಬ್ಬನನ್ನು ವಶಕ್ಕೆ ಪಡೆದಿರುವ ಪೊಲೀಸರು, ಮುಚ್ಚಳಿಕೆ ಬರೆ ಯಿಸಿ, ಎಚ್ಚರಿಕೆ ನೀಡಿ ಕಳುಹಿಸಿ ಕೊಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷದ ಕಾರ್ಮಿಕ ವಿಭಾಗದ ಇಂಟಕ್ ಸಂಘಟನೆಯ ಸ್ವಯಂಘೋಷಿತ ನಾಯಕನೊಬ್ಬ ಈ ಪ್ರಕರಣದ ಆರೋಪಿಯಾಗಿ ಗುರುತಿಸಲ್ಪ ಟ್ಟಿದ್ದಾನೆ.
ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಆರೋಪಿಯನ್ನು ಹಿಂದೊಮ್ಮೆ ಉರ್ವ ಠಾಣೆಯ ಇನ್ಸ್ಪೆಕ್ಟರ್ ಭಾರತಿ ಬಂಧಿಸಿ ಜೈಲಿಗೆ ತಳ್ಳಿದರು. ಈ ವೇಳೆ ಈತ ಹೊಂದಿದ್ದ ರಿವಾಲ್ವರ್ ಪರವಾನಿಗೆಯನ್ನು ಅಮಾನತುನಲ್ಲಿರಿಸ ಲಾಗಿತ್ತು.
ಪೊಲೀಸರು ದಾಖಲಿಸಿಕೊಂಡಿದ್ದ ಈ ಪ್ರಕರಣ ಹೈಕೋರ್ಟ್ ನಲ್ಲಿ ರದ್ದುಗೊಂಡಿತ್ತು. ಈ ಆದೇಶವನ್ನು ಮುಂದಿರಿಸಿ ತನ್ನ ರಿವಾಲ್ವರ್ ಲೈಸೆನ್ಸ್ ಅಮಾನತನ್ನು ರದ್ದುಪಡಿಸಬೇಕೆಂದು ಆರೋಪಿ ಪೊಲೀಸರ ಮೇಲೆ ಸತತ ಒತ್ತಡ ಹೇರುತ್ತಿದ್ದ. ಹಲವು ಕಾಂಗ್ರೆಸ್ ಮುಖಂಡರ ಪ್ರಭಾವವನ್ನು ಬಳಸಿ ಕೊಂಡಿದ್ದ. ಆದರೆ ದಿಟ್ಟ ಪೊಲೀಸ್ ಕಮಿಷನರ್ ಇದಕ್ಕೆ ಕ್ಯಾರೆ ಅಂದಿರಲಿಲ್ಲ.
ಇದಕ್ಕಾಗಿ ತನ್ನ ಕ್ರಿಮಿನಲ್ ಬುದ್ಧಿಯನ್ನು ಪ್ರಯೋಗಿಸಿದ ಆರೋಪಿ, ಕಳೆದ ವಾರ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯ ಹೆಸರಿನಲ್ಲಿ ಪೊಲೀಸ್ ಕಮಿಷನರಿಗೆ ಅನಾಮದೇಯ ವ್ಯಕ್ತಿಯಿಂದ ಕರೆ ಮಾಡಿಸಿ ರಿವಾಲ್ವರ್ ಅಮಾನತನ್ನು ರದ್ದು ಗೊಳಿಸುವಂತೆ ಸೂಚಿಸಿದ್ದ. ಇದರಿಂದ ಸಂಶಯಗೊಂಡ ಪೊಲೀಸ್ ಕಮಿಷನರ್ ಅನುಪಮ ಅಗರ್ವಾಲ್ ಮುಖ್ಯಮಂತ್ರಿಗಳ ಕಚೇರಿಯಲ್ಲಿ ವಿಚಾರಿಸಿದಾಗ ಅಂತಹ ಯಾವುದೇ ಕರೆ ಮಾಡದೇ ಇರುವುದು ದೃಢಪಟ್ಟಿತ್ತು
ತಕ್ಷಣ ಆರೋಪಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಒಂದು ಇಡೀ ದಿನ ಪೊಲೀಸ್ ಠಾಣೆಯಲ್ಲಿ ಕುಳ್ಳಿರಿಸಿ, ಮುಚ್ಚಳಿಕೆ ಬರೆಯಿಸಿ, ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟಿದ್ದಾರೆ.
ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಬೆನ್ನಲ್ಲೇ ವಿಧಾನ ಪರಿಷತ್ ಸದಸ್ಯರೊಬ್ಬರು ಪೊಲೀಸ್ ಕಮಿಷನರ್ ರ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ್ದರು ಎಂದು ತಿಳಿದುಬಂದಿದೆ.
ಗನ್ ಲೈಸನ್ಸ್ ವಿಭಾಗದ ಸಿಬ್ಬಂದಿ ಅಮಾನತು
ಇದೇ ವೇಳೆ ನಡೆದ ಅನಿರೀಕ್ಷಿತ ಬೆಳವಣಿಗೆ ಯೊಂದರಲ್ಲಿ ಮಂಗ ಳೂರು ಪೊಲೀಸ್ ಕಮಿ ಷನರ್ ಕಚೇರಿಯ ಗನ್ ಲೈಸನ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಅಮಾ ನತುಗೊಳಿಸಿ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ.
ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಹೆಸರಿನಲ್ಲಿ ಕರೆ ಮಾಡಿದ್ದ ಆರೋಪಿ ಯೊಂದಿಗೆ ಕಚೇರಿ ಸಿಬ್ಬಂದಿ ಶಾಮಿಲಾಗಿ ರುವ ಹಿನ್ನೆಲೆಯಲ್ಲಿ ಈ ಅಮಾನತು ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈತನ ಮೇಲೆ ಹಿಂದೆ ಮಂಗಳೂರಿನ ಬರ್ಕೆ ಠಾಣ ವ್ಯಾಪ್ತಿಯಲ್ಲಿ ಕಾಲೇಜ್ ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿರುವ ಸಮಯ ರೆಡ್ ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಪ್ರಕರಣ ದಾಖಲಾಗಿ ಈತನನ್ನು ಜೈಲಿಗೆ ಕಳಿಸಲಾಗಿತ್ತು.
ನಕಲಿ ಕರೆ ಮಾಡಿಸಿದ್ದ ಆರೋಪಿ ಮಂಗಳೂರು ಪರಿಸರದಲ್ಲಿ ವೇಶ್ಯಾವಾಟಿಕೆ ದಲ್ಲಾಳಿಯಾಗಿ ಗುರುತಿಸಿಕೊಂಡಿದ್ದಾನೆ. ಪೊಲೀಸರ ಮೇಲೆ ಹಲ್ಲೆ ನಡೆಸಲು ಹೋಗಿ ಈ ಹಿಂದೆ ದಕ್ಷ ಪೊಲೀಸ್ ಅಧಿಕಾರಿ ಭಾರತೀಯವರಿಂದ ಕಪಾಳ ಮೋಕ್ಷಕ್ಕೆ ಒಳಗಾಗಿದ್ದ. ಅವರ ಅಮಾನತಿಗೂ ಈತ ಪ್ರಯತ್ನಿಸಿದ್ದ. ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಒಳಗೊಂಡಿರುವ ಈತನ ರಿವಾಲ್ವರ್ ಲೈಸೆನ್ಸ್ ಅನ್ನು ಶಾಶ್ವತವಾಗಿ ರದ್ದು ಪಡಿಸಬೇಕೆಂದು ರಾಜ್ಯ ಗೃಹ ಮಂತ್ರಿಗಳಿಗೆ ಮತ್ತು ಗೃಹ ಕಾರ್ಯದರ್ಶಿಗಳಿಗೆ ಪತ್ರ ಬರೆದು ಒತ್ತಾಯಿ ಸಲು ಕಾಂಗ್ರೆಸ್ ಕಾರ್ಯಕರ್ತರ ನಿಯೋಗವನ್ನು ನಿರ್ಧರಿಸಿದೆ.
ಇದೇ ವೇಳೆ ಈ ನಕಲಿ ಕಾಂಗ್ರೆಸ್ ಮುಖಂಡನಿಗೆ ಬೆಂಬಲವಾಗಿ ನಿಂತಿರುವ ವಿಧಾನಪರಿಷತ್ ಸದಸ್ಯರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ನಕಲಿ ಕಾಂಗ್ರೆಸ್ ಮುಖಂಡನ ಕುರಿತು, ಕೆಲವೇ ದಿನಗಳ ಹಿಂದೆ “ಚೋರ ಗುರು- ಚಂಡಾಳ ಶಿಷ್ಯ’ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವರದಿ ಯೊಂದು ಹರಿದಾಡಿತ್ತು.
ಟಾಡ ಕಾಯಿದೆಯಡಿ ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ಬಂಧನಕೊಳಗಾಗಿದ್ದ ಕುಖ್ಯಾತ ರೌಡಿ ಒಬ್ಬನಿಗೆ ರಿವಾಲ್ವರ್ ಪರವಾನಿಗೆ ದೊರಕಿಸಿಕೊಡಲು ಪ್ರಯತ್ನಿಸಿರುವ ಕುರಿತಂತೆ ರಾಜ್ಯ ಪೊಲೀಸ್ ವರಿಷ್ಠಾಧಿಕಾರಿಗಳ ಗಮನ ಸೆಳೆಯಲಾಗಿತ್ತು.
ಇದೇ “ಚೋರ ಗುರು- ಚಂಡಾಲ ಶಿಷ್ಯ”ರ ಜೋಡಿ ದಕ್ಷ ಪೊಲೀಸ್ ಅಧಿಕಾರಿಗಳಾದ ಭಾರತೀ ಹಾಗೂ ಕದ್ರಿ ಠಾಣೆಯ ಇನ್ಸ್ಪೆಕ್ಟರ್ ಸೋಮಶೇಖರ್ ಅಮಾನತ್ತಿಗೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು.