Editor's Picksಅಪರಾಧಮಂಗಳೂರು

ಪಡುಶೆಡ್ಡೆ ರೈಲು ಸೇತುವೆಯ ಪಿಲ್ಲರ್ ಅಡಿಯಲ್ಲಿ ಅಕ್ರಮ ಮರಳುಗಾರಿಕೆ .ರೈಲು ಸೇತುವೆಗೆ ಕುಸಿಯುವ ಅಪಾಯ! ಜಿಲ್ಲಾಡಳಿತ, ಗಣಿ ಮತ್ತು ಪೊಲೀಸ್ ಇಲಾಖೆ ಏಕೆ ಮೌನ?

ಪಡುಶೆಡ್ಡೆ ರೈಲು ಸೇತುವೆಯ ಪಿಲ್ಲರ್ ಅಡಿಯಲ್ಲಿ ನಿರಂತರವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. 2018 ರಲ್ಲಿ, ರೈಲು ಸೇತುವೆ ಕುಸಿಯುವ ಅಪಾಯವನ್ನು ಅರ್ಥಮಾಡಿಕೊಂಡು, ಆಗಿನ ಜಿಲ್ಲಾಧಿಕಾರಿಯವರು ಅಕ್ರಮ ಮರಳು ಗಾರಿಕೆ ನಡೆಯುವ ಜಾಗದ ಮಾಲಕರಾದ ಶ್ರೀಮತಿ ಪ್ರೇಮಾ ಡಿಸೋಜ ಮತ್ತು ಸಚಿನ್ ಕೆ ಶೆಟ್ಟಿ ಅವರ ಮೇಲೆ ಕಲಂ 200 ದಂಡ ಪ್ರಕ್ರಿಯೆ ಸಂಹಿತೆ ಹಾಗೂ ಕಾಲಂ 22 MMRD, ಕಾಯ್ದೆ 1957 ರ ಅಡಿಯಲ್ಲಿ ದೂರು ದಾಖಲಿಸಿ ಅಕ್ರಮ ಮರಳು ಮರಳುಗಾರಿಕೆ ನಡೆಯುವ ಜಾಗಕ್ಕೆ ಹೋಗುವ ದಾರಿಗೆ ತಡೆ ಗೋಡೆ ನಿರ್ಮಿಸಿ ಕ್ರಮ ಕೈಗೊಂಡಿದ್ದರು.


ಅಕ್ರಮ ಮರಳುಗಾರಿಕೆ ದಂದೆ ಹಾವಳಿ ಎಷ್ಟರ ಮಟ್ಟಿಗೆ ಬೆಳೆದಿದೆ ಅಂದರೆ ಅಂದಿನ ಜಿಲ್ಲಾಧಿಕಾರಿಯವರು ನಿರ್ಮಿಸಿದ ತಡೆಗೋಡೆಯನ್ನು ಅಕ್ರಮವಾಗಿ ಧ್ವಂಸಗೊಳಿಸಿ ದೊಡ್ಡ ದೊಡ್ಡ ಹಿಟಾಚಿ ಯಂತ್ರಗಳನ್ನು ಬಳಸಿ ರಾಜಾರೋಷವಾಗಿ ಅಕ್ರಮ ಮರಳುಗಾರಿಕೆ ಪ್ರೇಮ ಡಿಸೋಜ ,ಸಚಿನ್ ಶೆಟ್ಟಿ ಮತ್ತು ಮೂಡುಶೆಡ್ಡೆ ಭಾಗದ ಕಾಂಗ್ರೆಸ್ ನಾಯಕನ ಪುತ್ರ ಕೆ.ಪಿ ಪ್ರಸಾದ್ ಮಲ್ಲಿ ನಡೆಸುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ನಮ್ಮ ವರದಿಗಾರರು ಅಕ್ರಮ ಮರಳುಗಾರಿಕೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ನಡೆಯುತ್ತಿರುವ ಅಕ್ರಮದ ವಿಡಿಯೋ ಚಿತ್ರೀಕರಣ ಕೂಡ ಮಾಡಿದ್ದಾರೆ.
ಮಾನ್ಯ ಜಿಲ್ಲಾಧಿಕಾರಿಗಳು ಗಣಿ ಮತ್ತು ಪೋಲಿಸ್ ಇಲಾಖೆ ಶೀಘ್ರದಲ್ಲಿ ಕ್ರಮ ಕೈಗೊಳ್ಳದಿದ್ದರೆ ರೈಲ್ವೆ ಸೇತುವೆ ಕುಸಿವ ದಿನಗಳು ದೂರವಿಲ್ಲ.

Related posts

ಅಕ್ಟೋಬ‌ರ್ 3ರಿಂದ 14ರ ವರೆಗೆ ವೈಭವದ ಮಂಗಳೂರು ದಸರಾ

kudlaadmin

ಗಣೇಶೋತ್ಸವ, ಈದ್ ಮಿಲಾದ್: ಸಂಘಟಕರಿಗೆ ಪೊಲೀಸರ ಸೂಚನೆ

kudlaadmin

ಪಿಲಿಕುಳ ಕಂಬಳಕ್ಕೆ ವಿಘ್ನ: ‘ಸೈಲೆಂಟ್ ರೋನ್’ ಘೋಷಣೆಗೆ ಮನವಿ

kudlaadmin

Leave a Comment