ಮಂಗಳೂರುರಾಜಕೀಯ

ಕಳೆದ 2 ದಶಕಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ದಕ್ಷಿಣ ಕನ್ನಡ ಯಾವಾಗಲೂ ಹೈವೋಲ್ಟೇಜ್ ರಣರಂಗವಾಗಿ ಪರಿಗಣಿಸಲ್ಪಟ್ಟಿದೆ.

ಆದರೆ ಎರಡೂ ರಾಜಕೀಯ ಪಕ್ಷಗಳ ನಡುವಿನ ಎಲ್ಲಾ ಘರ್ಷಣೆಗಳು ಚುನಾವಣೆಯ, ಸಮಯಕ್ಕೆ ಮಾತ್ರ ಸೀಮಿತವಾಗಿರುತ್ತಿತ್ತು.ಚುನಾವಣಾ ಫಲಿತಾಂಶಗಳು ಹೊರಬಿದ್ದ ನಂತರ, ಅಲ್ಲಲ್ಲಿ ಒಂದೆರಡು ಸಣ್ಣಪುಟ್ಟ ಘರ್ಷಣೆಗಳು ನಡೆಯುತ್ತಿತ್ತು ಆದರೆ ಕ್ರಮೇಣ ನಗರವು ಸಹಜ ಸ್ಥಿತಿಗೆ ಮತ್ತೆ ಮರಳುತ್ತಿತ್ತು. ಜನರು ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಸಾಮಾನ್ಯ ಜೀವನಕ್ಕೆ ಮರಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಒಂದು ನಿರೀಕ್ಷಿತ ಬೆಳವಣಿಗೆ ದಕ್ಷಿಣ ಕನ್ನಡದಲ್ಲಿ ನಡೆಯುತ್ತಿದೆ. ಕೋಮು ಸೂಕ್ಷ್ಮ ಪ್ರದೇಶವಾಗಿದ್ದ ದಕ್ಷಿಣ ಕನ್ನಡ ಕ್ರಮೇಣವಾಗಿ ರಾಜಕೀಯ ಸೂಕ್ಷ್ಮ ಪ್ರದೇಶವಾಗಿ ಬದಲಾಗುತ್ತಿರುವುದು ಇಂದಿನ ವಾಸ್ತವ್ಯ.

ನಮ್ಮ ಜಿಲ್ಲೆಯ ಎಲ್ಲ ಕ್ಷೇತ್ರಗಳಿಗೂ ರಾಜಕೀಯ ಬಣ್ಣ ಬಂದುಬಿಟ್ಟಿದೆ. ರಿಕ್ಷಾ ಡ್ರೈವರ್ ಗಳಿಂದ ಹಿಡಿದು ದೊಡ್ಡ ದೊಡ್ಡ ವ್ಯಾಪಾರಿಗಳಲ್ಲಿ ಕೂಡ ಬಿಜೆಪಿ ಕಾಂಗ್ರೆಸ್ ಎನ್ನುವ ಎರಡು ಬಣಗಳು ಪ್ರಾರಂಭವಾಗಿದೆ. ಇದಕ್ಕೆ ಕಾಕತಾಲಿಯ ಎನ್ನುವಂತೆ ಜಿಲ್ಲೆಯಲ್ಲಿ ಅನೇಕ ಘಟನೆಗಳು ನಡೆಯುತ್ತಿದೆ. ಒಂದೆಡೆ ಮೊನ್ನೆ ಕಾಂಗ್ರೆಸ್ ನವರ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜರವರು ರಾಜ್ಯಪಾಲರ ನಡೆಯನ್ನು ವಿರೋಧಿಸುತ್ತಾ “ಅವರನ್ನು ಬಾಂಗ್ಲಾ ಮಾದರಿಯಲ್ಲಿ ಓಡಿಸುತ್ತೇವೆ “ಎಂದು ಹೇಳಿಕೆ ಕೊಟ್ಟ ಕೂಡಲೇ ಅವರ ಪಕ್ಷದ ಕಾರ್ಯಕರ್ತರು ಟೈಯರ್ ಗಳಿಗೆ ಬೆಂಕಿ ಹಚ್ಚಿ ಚಲಿಸುತ್ತಿರುವ ಬಸ್ಸಿಗೆ ಕಲ್ಲು ಎಸೆದು ಅರಾಜುಕತೆ ಸೃಷ್ಟಿ ಮಾಡಿರುತ್ತಾರೆ. ಇದಕ್ಕೆ ಪ್ರತಿ ಉತ್ತರವಾಗಿ ಬಿಜೆಪಿ ಐಬನ್ ಡಿಸೋಜಾ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿರುತ್ತಾರೆ.

ಅಲ್ಲಿಗೆ ಮುಗಿಯದ ಈ ಅಧ್ಯಾಯ ಕೆಲವೊಂದು ಕಿಡಿಕೇಡಿಗಳು ಐ ವಾಂಟ್ ಡಿಸೋಝರ್ ಅವರ ಮನೆ ಮೇಲೆಗೆ ಒಂದು ಕಲ್ಲನ್ನು ಬಿಸಾಕಿ ಉರಿಯುವ ಬೆಂಕಿಗೆ ತುಪ್ಪವನ್ನು ಸುರಿಯುತ್ತಾರೆ. ಇದಕ್ಕೆ ಪ್ರತಿ ಉತ್ತರವಾಗಿ ಐ ವನ್ ಡಿಸೋಜಾ ಬೆಂಬಲಿಗರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಕರೆ ಕೊಡುತ್ತಾರೆ. ಅಕ್ಕ ಬಿಜೆಪಿಯವರು ಕಾಂಗ್ರೆಸ್ ನವರಿಗೆ ತಾಕತ್ತಿದ್ದರೆ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ತೋರಿಸಿ ಅಂತ ಸವಾಲನ್ನು ಕಾಂಗ್ರೆಸ್ಸಿಗರಿಗೆ ಹಾಕುತ್ತಾರೆ. ಇತ್ತ ಕಾಂಗ್ರೆಸ್ ಕಾರ್ಯಕರ್ತರು ದೊಡ್ಡ ಸಂಖ್ಯೆ ಮುತ್ತಿಗೆಗೆ ಪ್ರಯತ್ನಪಟ್ಟರೆ ಅತ್ತ ದೊಡ್ಡ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಬಿಜೆಪಿ ಪಕ್ಷದ ಕಚೇರಿ ಮುಂದೆ ಕಾದು ನಿಂತುಕೊಂಡಿದ್ದರು. ಒಂದು ವೇಳೆ ಎರಡು ಪಕ್ಷದ ಕಾರ್ಯಕರ್ತರು ಮುಖಾಮುಖಿಯಾದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ದೊಡ್ಡ ಮಟ್ಟದ ಘರ್ಷಣೆ ನಡೆಯುತ್ತಿತ್ತು. ಪೊಲೀಸ್ ಇಲಾಖೆ ಈ ಪ್ರತಿಭಟನೆಗೆ ಅವಕಾಶ ಕಲ್ಪಿಸದ ಕಾರಣ ಕಾಂಗ್ರೆಸ್ ಪ್ರತಿಭಟನೆ ಕಂಕನಾಡಿಯಲ್ಲಿ ಕೊನೆಗೊಂಡಿತ್ತು.ಪೊಲೀಸ್ ಇಲಾಖೆಯ ಸಮಯ ಪ್ರಜ್ಞೆಯಿಂದ ದೊಡ್ಡ ಒಂದು ದುರಂತ ತಪ್ಪಿದಂತಾಗಿದೆ.

Related posts

ಬಿಜೆಪಿ ಮುಖಂಡ ಪುತ್ತಿಲ ವಿರುದ್ಧಲೈಂಗಿಕ ದೌರ್ಜನ್ಯ ಕೇಸ್

kudlaadmin

ನವೆಂಬರ್‌ನಲ್ಲಿ ತುಳು ಉತ್ಸವ ರೀತಿ ವೈವಿಧ್ಯಮಯ ಕಾರ್ಯಕ್ರಮ

kudlaadmin

ಕೇಂದ್ರ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ರಸ್ತೆಗಳ ಅಭಿವೃದ್ಧಿಗಾಗಿ 42 ಕೋಟಿ ರೂ. ಅನುದಾನ ಬಿಡುಗಡೆ: ಸಂಸದ ಕ್ಯಾ. ಬ್ರಿಜೇಶ್ ಚೌಟ

kudlaadmin

Leave a Comment