ಮಂಗಳೂರುಹಬ್ಬ

ಗಣೇಶೋತ್ಸವ, ಈದ್ ಮಿಲಾದ್: ಸಂಘಟಕರಿಗೆ ಪೊಲೀಸರ ಸೂಚನೆ

Ganesha Chathurthi and Eid Milad

ನಗರ ಪೊಲೀಸ್ ಕಮಿಷನರೇಟ್ ಹಾಗೂ ದ.ಕ.ಜಿಲ್ಲಾ ವ್ಯಾಪ್ತಿಯಲ್ಲಿ ಸಪ್ಟೆಂಬರ್‌ನಲ್ಲಿ ನಡೆಯಲಿರುವ ಗೌರಿ ಗಣೇಶ, ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸಂಘಟಕರಿಗೆ ಕೆಲವೊಂದು ನಿರ್ದೇಶನಗಳನ್ನು ಹೊರಡಿಸಿದೆ.

ಉತ್ಸವ ನಡೆಯುವ ಸ್ಥಳಕ್ಕೆ ಮೆಸ್ಕಾಂ, ಅಗ್ನಿಶಾಮಕ, ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆದುಕೊಳ್ಳಬೇಕು, ಪ್ರತಿಷ್ಠಾಪನೆ ಸ್ಥಳದ ಮಾಲೀಕರ ಅನುಮತಿ ಪಡೆದುಕೊಳ್ಳಬೇಕು, ಪೆಂಡಾಲ್‌ಗಳನ್ನು ಭದ್ರವಾಗಿ ಹಾಕಬೇಕು, ಉತ್ಸವ ಸ್ಥಳದಲ್ಲಿ ಬೆಂಕಿಗಳ ಬಗ್ಗೆ ಎಚ್ಚರವಹಿಸಬೇಕು, ಅಗ್ನಿನಂದಕ ಸಲಕರಣೆಗಳಾಧ ಮರಳು, ನೀರು ತುಂಬಿದ ಬಕೆಟ್, ಫೈರ್ ಎಕ್ಸಿಂಗ್ಯೂಷ‌ರ್ ಇಟ್ಟುಕೊಳ್ಳಬೇಕು, ಪ್ಲೆಕ್ಸ್, ಬ್ಯಾನರ್ ಅಳವಡಿಕೆಗೆ ಸ್ಥಳೀಯ ಆಡಳಿತದಿಂದ ಅನುಮತಿ ಪಡೆದುಕೊಳ್ಳಬೇಕು, ಯಾವುದೇ ಪ್ರಚೋದನಾತ್ಮಕ ಬರಹ, ಚಿತ್ರ, ವೇಷಭೂಷಣ ಪ್ರದರ್ಶನವಿರಬಾರದು, ಯಾವುದೇ ಧರ್ಮ-ಸಮುದಾಯದ ಭಾವನೆಗಳಲ್ಲಿ ಧಕ್ಕೆಯನ್ನುಂಟು ಮಾಡುವ ಪ್ರದರ್ಶನವಿರಬಾರದು, ಸುಡುಮದ್ದು ಆಸ್ಪತ್ರೆಗಳ ಬಳಿ, ಜನಸಂದಣಿಯ ಮಧ್ಯೆ ಬಳಸಬಾರದು, ಶೋಭಾಯಾತ್ರೆ ರಸ್ತೆ, ದಿನ, ಸಮಯದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮುಂಚಿತವಾಗಿ ತಿಳಿಸಬೇಕು, ತುರ್ತು ಚಿಕಿತ್ಸಾ ವ್ಯವಸ್ಥೆ, ಆ್ಯಂಬುಲೆನ್ಸ್‌ ಸೌಲಭ್ಯ ಇರಿಸಿಕೊಂಡಿರಬೇಕು, ಕಾರ್ಯಕ್ರಮದಲ್ಲಿ ಬಳಸುವ ವಾಹನಗಳಿಗೆ ಫಿಟ್‌ನೆಸ್ ಸರ್ಟಿಫಿಕೇಟ್ ಹೊಂದಿರಬೇಕು, ಸ್ವಯಂಸೇವಕರಿಗೆ ಒಂದೇ ರೀತಿಯ ಬಣ್ಣದ ಉಡುಪಿಗಳನ್ನು ಹೊಂದಿರಬೇಕು ಮತ್ತು ಮೆರವಣಿಗೆ ಉಸ್ತುವಾರಿ ವಹಿಸಬೇಕು, ಪೊಲೀಸ್ ಅಧಿಕಾರಿಗಳ ಸೂಚನೆಗಳನ್ನು ಪಾಲಿಸಬೇಕುಮತ್ತು ಸಹಕರಿಸಬೇಕು ಎಂದು ಸೂಚಿಸಲಾಗಿದೆ.

ಡಿಜೆ ಅನುಮತಿ ಇಲ್ಲ: ಧ್ವನಿವರ್ಧಕ ಅಳವಡಿಸುವ ಮೊದಲು ಪೊಲೀಸ್ ಇಲಾಖೆಯಿಂದ

ಪಡೆಯಲಾದ ಪರವಾನಗಿಯನ್ನು ಪರಿಶೀಲಿಸಿ ಅನುಮತಿಯಿದ್ದಲ್ಲಿ ಮಾತ್ರ ಧ್ವನಿವರ್ಧಕವನ್ನು ಅಳವಡಿಸುವುದು, ಪರವಾನಗಿಯಲ್ಲಿ ನಿಗದಿಪಡಿಸಲಾದ ಸಮಯದವರೆಗೆ ಮಾತ್ರ ಧ್ವನಿವರ್ಧಕ ಬಳಸುವುದು, ಡಿಜೆ ಬಳಸಲು ಅವಕಾಶವಿಲ್ಲ, ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳ ಬಳಿ ಧ್ವನಿವರ್ಧಕ ಅಳವಡಿಸಬಾರದು ಎಂದು ಸೂಚನೆ ನೀಡಲಾಗಿದೆ.

Ganesha Chathurthi and Eid Milad

Related posts

ಪಡುಶೆಡ್ಡೆ ರೈಲು ಸೇತುವೆಯ ಪಿಲ್ಲರ್ ಅಡಿಯಲ್ಲಿ ಅಕ್ರಮ ಮರಳುಗಾರಿಕೆ .ರೈಲು ಸೇತುವೆಗೆ ಕುಸಿಯುವ ಅಪಾಯ! ಜಿಲ್ಲಾಡಳಿತ, ಗಣಿ ಮತ್ತು ಪೊಲೀಸ್ ಇಲಾಖೆ ಏಕೆ ಮೌನ?

kudlaadmin

ಅಕ್ಟೋಬ‌ರ್ 3ರಿಂದ 14ರ ವರೆಗೆ ವೈಭವದ ಮಂಗಳೂರು ದಸರಾ

kudlaadmin

ಕಳೆದ 2 ದಶಕಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ದಕ್ಷಿಣ ಕನ್ನಡ ಯಾವಾಗಲೂ ಹೈವೋಲ್ಟೇಜ್ ರಣರಂಗವಾಗಿ ಪರಿಗಣಿಸಲ್ಪಟ್ಟಿದೆ.

kudlaadmin

Leave a Comment