ಕಾರ್ಕಳ: ಯುವತಿಯೊಬ್ಬಳಿಗೆ ಅನ್ಯ ಕೋಮಿನ ಯುವಕನೊಬ್ಬ ಮದ್ಯ ಕುಡಿಸಿ ಭೀಕರವಾಗಿ ಅತ್ಯಾಚಾರ ಎಸಗಿದ ಘಟನೆ ಉಡುಪಿಯ ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿನಡೆದಿದೆ. ಪ್ರಕರಣಕ್ಕೆ ಸಂಬಂ ಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಕುರಿತು ಹಿಂದು ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಗ್ಯಾಂಗ್ ರೇಪ್ ಶಂಕೆ ವ್ಯಕ್ತಪಡಿಸಿವೆ. ಅಲ್ತಾಫ್ (34), ಕೆವಿಯರ್‌ರಿಚರ್ಡ್ ಕ್ವಾಡ್ರಸ್ (35) ಬಂಧಿತ ಆರೋಪಿಗಳು. ಸಂತ್ರಸ್ತೆ ಮತ್ತು ಆರೋಪಿ 3 ತಿಂಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದರು. ತನ್ನನ್ನು ಕಾಡಿಗೆ ಕರೆದುಕೊಂಡು ಹೋಗಿ, ಅಮಲು ಬರಿಸುವ ಪದಾರ್ಥ ಕುಡಿಸಿ, ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ. ಆರೋಪಿಯು ಡ್ರಗ್ಸ್ ವ್ಯಸನಿಯಾಗಿದ್ದು, ಯುವತಿಗೂ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ್ದಾನೆ ಎಂದು ಐಜಿಪಿ ಹೇಳಿದ್ದಾರೆ. ಘಟನೆ ವಿರುದ್ದ ಹೋರಾಟಕ್ಕೆ ಹಿಂದು ಸಂಘಟನೆಗಳು ಮುಂದಾಗಿವೆ.
ಆರೋಪಿಗಳು ಪೊಲೀಸ್ ಕಸ್ಟಡಿಗೆ ಅತ್ಯಾಚಾರ ಆರೋಪಿ ಅಲ್ತಾಫ್ ಪರ ವಾದಿಸದಂತೆ ವಕೀಲರಿಗೆ ಮುಸ್ಲಿಂ ಮುಖಂಡ ಕರೆ. ಸಂತ್ರಸ್ತೆ ಮಾದಕ ವಸ್ತು ಸೇವನೆ ದೃಢ: ಆರೋಪಿಗಳ ವರದಿ ನೆಗೆಟಿವ್. ದಿಟ್ಟಕ್ರಮಕ್ಕೆ ಪೊಲೀಸರಿಗೆ ಸಚಿವೆ ಹೆಬ್ಬಾಳರ್ ಸೂಚನೆ ಮಹಿಳಾ ಆಯೋಗದಿಂದ ಸ್ವಯಂ ಪ್ರೇರಿತ ದೂರು.