ಮಂಗಳೂರುರಾಜ್ಯಹಬ್ಬ

ಅಕ್ಟೋಬ‌ರ್ 3ರಿಂದ 14ರ ವರೆಗೆ ವೈಭವದ ಮಂಗಳೂರು ದಸರಾ

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆಯುವ ‘ಮಂಗಳೂರು ದಸರಾ’ವನ್ನು ಕೇಂದ್ರದ ಮಾಜಿ ಸಚಿವ, ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾ ರೂವಾರಿಜನಾರ್ದನ ಪೂಜಾರಿ ಅವರ ಮಾರ್ಗದರ್ಶನವನ್ನು ವೈಭವಯುತವಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಧ್ಯಕ್ಷ ಎಚ್.ಎಸ್. ಸಾಯಿರಾಮ್ ತಿಳಿಸಿದ್ದಾರೆ.” ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶನಿವಾರ ನಡೆದ ಆಡಳಿತ ಮಂಡಳಿ ಸಭೆಯ ಬಳಿಕ ಅವರು ಮಾಧ್ಯಮಕ್ಕೆ ಈ ಮಾಹಿತಿ ನೀಡಿದ್ದಾರೆ.

ಮಂಗಳೂರು ದಸರಾ ವರ್ಷದಿಂದ ವರ್ಷಕ್ಕೆವೈಭವಯುತವಾಗಿನಡೆಯುತ್ತಿದ್ದು, ನಾಡಿನಲ್ಲೇ ಮೈಸೂರು ಬಳಿಕ ಎಂದರು. ಮಹಾಉತ್ಸವವಾಗಿ ರೂಪುಗೊಂಡಿದೆ. ಇದಕ್ಕೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಸೇರಿದಂತೆ ಸಾರ್ವಜನಿಕರ ಸಹಕಾರ ಕಾರಣವಾಗಿದೆ. ಈ ಬಾರಿ ಅ.3ರಂದು ಆರಂಭವಾಗುವ ಮಂಗಳೂರು ದಸರಾ ಅ.14ರ ವರೆಗೆ ನಡೆಯಲಿದೆ. ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಮಾರ್ಗದರ್ಶನ ಹಾಗೂ ಕ್ಷೇತ್ರದ ಟ್ರಸ್ಟಿಗಳು, ಅಭಿವೃದ್ಧಿ ಸಮಿತಿಯ ಸಲಹೆಗಳನ್ನು ಪಡೆದುಕೊಂಡು ಈ ಬಾರಿಯ ದಸರಾವನ್ನು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈವಿಧ್ಯ ಮಯವಾಗಿನಡೆಸಲು ತೀರ್ಮಾನಿಸಲಾಗಿದೆ.

ಸಭೆಯಲ್ಲಿ ದೇವಸ್ಥಾನದ ಉಪಾಧ್ಯಕ್ಷೆ ಉರ್ಮಿಳಾ ರಮೇಶ್ ಕುಮಾರ್, ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ದರಾಜ್ ಆರ್., ಟ್ರಸ್ಟಿಗಳಾದ ಶೇಖರ್‌ಪೂಜಾರಿ, ರವಿಶಂಕರ್ ಮಿಜಾರು, ಸಂತೋಷ್ ಕುಮಾರ್, ಜಗದೀಪ್ ಡಿ. ಸುವರ್ಣ ಇದ್ದರು.

Related posts

ಸಿಎಂ ಬದಲಾವಣೆ ಚರ್ಚೆ ನಡುವೆಯೇ ಗುಡುಗು, ನನ್ನನ್ನು ಯಾರಿಂದಲೂ ಅಲ್ಲಾಡಿಸಲಾಗದು: ಸಿದ್ದು

kudlaadmin

ದಿಲ್ಲಿಯಿಂದ ಸಂದೇಶ ಬಂದಿದೆ, 5 ವರ್ಷವೂ ಸಿದ್ದು ಸಿಎಂ: ಡಿಕೆಸು

kudlaadmin

ಸಿನಿಮೀಯ ಶೈಲಿಯಲ್ಲಿ ಬೆಳ್ಳಂಬೆಳಗ್ಗೆ ಕಿಲ್ಲಿಂಗ್ ಸ್ಟಾರ್ ಸ್ಥಳಾಂತರ ದರ್ಶನ್ ಈಗ ಬಳ್ಳಾರಿ ಕೈದಿ

kudlaadmin

Leave a Comment