ರಾಜಕೀಯರಾಜ್ಯ

ಸಿಎಂ ಬದಲಾವಣೆ ಚರ್ಚೆ ನಡುವೆಯೇ ಗುಡುಗು, ನನ್ನನ್ನು ಯಾರಿಂದಲೂ ಅಲ್ಲಾಡಿಸಲಾಗದು: ಸಿದ್ದು

ಸಿಎಂ ಬದಲಾವಣೆ ಚರ್ಚೆ ನಡುವೆಯೇ ಗುಡುಗು

ನನ್ನನ್ನು ಯಾರಿಂದಲೂ ಅಲ್ಲಾಡಿಸಲಾಗದು: ಸಿದ್ದು

ಜನರ ಆಶೀರ್ವಾದ ಇರುವವರೆಗೂ ಕೆಲಸ ಮಾಡುವೆ ಬಡವರಿಗೆ ಇನ್ನಷ್ಟು ಸೌಲಭ್ಯಗಳನ್ನು ನೀಡುವೆ: ಸಿಎಂ

‘ಜನರ ಆಶೀರ್ವಾದ ಇರುವವರೆಗೂ ನನ್ನನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ, ಬಡವರ ಪರ ಕೆಲಸ ಮುಂದುವರೆಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧಿಗಳಿಗೆ ತಿರು ಗೇಟು ನೀಡಿದ್ದಾರೆ. ಶಿವಾಜಿನಗರದಲ್ಲಿ ನಿರ್ಮಿಸಿರುವ ‘ಚರಕ’ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನೂತನ ಚಿಕಿತ್ಸಾ ಪದ್ಧತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ‘ಜನರ ಆಶೀರ್ವಾದ ಇರುವವರೆಗೂ ಸಿದ್ದರಾ ಮಯ್ಯನನ್ನು ಯಾರೂ ಅಲ್ಲಾಡಿಸಲು ಸಾಧ್ಯ ವಿಲ್ಲ, ಬಡವರ ಪರ ಕೆಲಸ ಮುಂದುವರೆಯ ಲಿವೆ. ಮುಂದೆಯೂ ನಿಮ್ಮ ಆಶೀರ್ವಾದವಿ ರಲಿ. ಇನ್ನೂ ಅಧಿಕಸೌಲಭ್ಯ ನೀಡಲಾಗುವುದು’ ಎಂದು ಭರವಸೆ ನೀಡಿದರು. ಬಡವರ ಅಭಿವೃ ದ್ದಿಗಾಗಿ ಗ್ಯಾರಂಟಿ ಯೋಜನೆಗಳಿಗೆ ಬಜೆಟ್ ನಲ್ಲಿ 52 ಸಾವಿರ ಕೋಟಿ ರು. ಮೀಸಲಿಟ್ಟಿದ್ದೇವೆ. ಬಡವರಪರ ಕೆಲಸಮಾಡಿದರೆ ಬಿಜೆಪಿಯವರು ವಿಲವಿಲ ಎಂದು ಒದ್ದಾಡುತ್ತಾರೆ. 5 لا

ದೇಶಪಾಂಡೆ ‘ಸಿಎಂ’ ಹೇಳಿಕೆ ಸಂಚಲನ!

ಮಾಧ್ಯಮದ ಎದುರು ಆಸೆ ಹೇಳಬಾರದಿತ್ತು

ಸಿಎಂ ಕುರ್ಚಿ ಖಾಲಿ

ಇಲ್ಲ. ದೇಶ ಪಾಂಡೆ ಆಸೆ ಪಡುವುದು ತಪ್ಪಲ್ಲ. ಆದರೆ ಮಾಧ್ಯಮದ ಮುಂದೆ ಅದನ್ನು ಹೇಳಬಾರದಿತ್ತು.

* ಡಿ.ಕೆ.ಶಿವಕುಮಾರ್ ಡಿಸಿಎಂ

ದೇಶಪಾಂಡೆ ಸಿಎಂ ಆಗಲು ಅರ್ಹರು

ಸಿದ್ದರಾಮಯ್ಯ ಹಾಗೂ ದೇಶಪಾಂಡೆ ಸ್ನೇಹಿತರು. ದೇಶಪಾಂಡೆ ಸಿಎಂ ಆಗಲು ಅರ್ಹ ವ್ಯಕ್ತಿ. ಅವರು ಸಿಎಂ ಆದ್ರೆ ಮೊದಲು ಖುಷಿ ಪಡುವ ವ್ಯಕ್ತಿ ನಾನು.

* ಮಂಕಾಳ ವೈದ್ಯ ಸಚಿವ

ಸಿಎಂ ಆಗಲು ಹಗಲು ಕನಸು ಕಾಣಬೇಡಿರಿ

ಮುಖ್ಯಮಂತ್ರಿ ಆಗುವ ಹಗಲು ಕನಸು ಕಾಣಲು ಯಾರೂ ಹೋಗುವುದು ಬೇಡ. ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಶಕ್ತಿಶಾಲಿ ಆಗಿದ್ದಾರೆ.

* ಎಂ.ಬಿ.ಪಾಟೀಲ್ ಸಚಿವ

ಆಸೆ ತಪ್ಪಲ್ಲ, ಆದರೆ ಕುರ್ಚಿ ಖಾಲಿ ಇಲ್ಲ

ದೇಶಪಾಂಡೆ ಒಮ್ಮೆ ಸಿಎಂ ಆಗಬೇಕೆಂಬ ಆಸೆ ಇಟ್ಟುಕೊಂಡಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ, ನಮ್ಮಲ್ಲಿ ಸಿಎಂ ಕುರ್ಚಿ 5 ಖಾಲಿ ಇಲ್ಲ.

* ಜಮೀರ್ ಅಹ್ಮದ್ ಸಚಿವ

Related posts

ಅದ್ದೂರು ಸೇತುವೆ ಸಾಮರ್ಥ್ಯ ಪರೀಕ್ಷೆಗೆ ಕೊನೆಗೂ ಯಂತ್ರ ಬಂತು!

kudlaadmin

ರಾಜ್ಯಪಾಲರ ವಿರುದ್ಧ ಐವನ್ ಡಿಸೋಜಾ ಹೇಳಿಕೆ; ಸುಮೊಟೊ ದೂರು ದಾಖಲಿಸಲು ಪಟ್ಟು ಹಿಡಿದ ಬಿಜೆಪಿ ಯುವ ಮೋರ್ಚ.

kudlaadmin

ಬಿಜೆಪಿ ವಿರುದ್ದ ಕಾಂಗ್ರೆಸ್ ಇಂದು ಮತ್ತೊಂದು ಅಸ್ತ್ರ ಕೋವಿಡ್ ವರದಿ ಸಂಪುಟಕ್ಕೆ

kudlaadmin

Leave a Comment